Dear Visitor,
This blog is written in Kannada. If you are using latest version of Internet Explorer, all the fonts will appear properly. In case you are not able to read, try changing your browser - as we have tested this blogging with Internet Explorer and found to be displaying Kannada fonts without errors. For any further help, feel free to send us a mail.
ನಾವು ಪ್ರಕಟಿಸಿದ Yahoo Group ಮತ್ತು ಈ ಬ್ಲಾಗ್ ಗೆ ಇಲ್ಲಿ ತನಕ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಇದನ್ನು ಇನ್ನೊ ಹೆಚ್ಚು ಜನಪ್ರಿಯ ಮಾಡಲು ನನ್ನ ಕೆಲವು ಸಲಹೆಗಳು ಹೀಗಿವೆ:
೧. Birthday Babies of the Month: ನಮ್ಮ ಒಮಾನ್ ಕನ್ನಡ ವಾಸಿಗಳ ಪ್ರೀತಿಯ ಮಕ್ಕಳ ಹುಟ್ಟು ಹಬ್ಬದ ಸಂಬ್ರಮದಲ್ಲಿ ನಾವೂ ಒಂದಾಗುವ ಆಸೆ. ನಿಮ್ಮ ಬರ್ತ್ ಡೇ ಫೋಟೋಸ್ ಗಳನ್ನೂ ಈ ವೆಬ್ ಬ್ಲಾಗ್ನಲ್ಲಿ ಪಬ್ಲಿಷ್ ಮಾಡೋಣ. ಪ್ರತಿ ಸಲ ಬರ್ತ್ ಡೇ ಪಾರ್ಟಿ ಮುಗಿದ ಮೇಲೆ ನೀವು ಫೋಟೋ ಗಳನ್ನೂ ನನಗೆ ಈ ಮೈಲ್ ಮಾಡಿದರೆ ನಾವು ಈ ಬ್ಲಾಗ್ ನಾನಲ್ಲಿ ಪಬ್ಲಿಷ್ ಮಾಡ್ತೀವಿ. ಊರಿನಲ್ಲಿ ಅಜ್ಜಿ ಟಾಟಾ ಫೋಟೋ ನೋಡಬೇಕು ಅಂದ್ರೆ ತಕ್ಷಣ ಈ ವೆಬ್ ಬ್ಲಾಗ್ ಓಪನ್ ಮಾಡಿದ್ರೆ ಆಯ್ತು!
೨. Profile of the Month: ನಮ್ಮ ಒಮಾನಿನಲ್ಲಿ ಬಹಳಷ್ಟು ಕನ್ನಡಿಗರು ತುಂಬ ವರ್ಷ ದಿಂದ ಇದ್ದಾರೆ. ಪ್ರತಿ ತಿಂಗಳೂ ಒಬ್ಬೊಬ್ಬರನ್ನೇ ಆರಿಸಿ, ಅವರ ಕುಟುಂಬ ಸಮೇತ ಫೋಟೋ ಮತ್ತು ಕಿರು ಪರಿಚಯವನ್ನು ಈ ವೆಬ್ ಬ್ಲಾಗ್ ನಲ್ಲಿ ಪಬ್ಲಿಷ್ ಮಾಡೋಣ ಅನ್ನೋದು ಇನ್ನೊಂದು ಸಲಹೆ.
೩. Awards and Facilitations: ನಮ್ಮಲಿ ತುಂಬ ಕನ್ನಡಿಗರಿಗೆ ಅವರವರ ಸಂಘ ಸಂಸ್ಥೆ ಗಳಲ್ಲಿ ಅವಾಗವಾಗ ಪ್ರಶಸ್ತಿಗಳು ಬರುತ್ತಾ ಇರುತ್ತವೆ. ಉದಾಹರಣೆಗೆ ತುಂಬ ಕಂಪನಿ ಗಳಲ್ಲಿ annual day function ನಡೆದಾಗ outsanding achivers ಅಂತ ಪ್ರಶಸ್ತಿ ಕೊಡುತ್ತಾರೆ. ಅಥವಾ ಯಾವುದಾದರು ಒಳ್ಳೆ ಸಾದನೆ ಗಳಿಗೆ ಪ್ರಶಸ್ತಿ ಬಂದಾಗ ಅದನ್ನು ಈ ಬ್ಲಾಗ್ ಮೂಲಕ ಎಲ್ಲ ಕನ್ನಡಿಗರಿಗೂ ತಿಳಿಸಬಹುದು ಅನ್ನುವುದು ಇನ್ನೊಂದು ಸಲಹೆ.
ಇವತ್ತಿಗೆ ಇಷ್ಟಕ್ಕೆ ನಿಲ್ಲಿಸುತ್ತೇನೆ. ಇದನ್ನು ಓದಿದ ನಂತರ ಕೆಳಗಡೆ ಇರುವ comments ಬಟ್ಟನ್ ಒತ್ತಿ ನಿಮ್ಮ ಅಭಿಪ್ರಾಯ ಬರೆಯಿರಿ ಅಥವಾ ನಮಗೊಂದು ಈ ಮೈಲ್ ಕಳಿಸಿ.
ಇಂತಿ ನಿಮ್ಮ
ಒಮಾನಿ ಕನ್ನಡಿಗ
Tuesday, March 25, 2008
Thursday, March 20, 2008
ಕಿರು ಪರಿಚಯ ಮತ್ತು ಸುಸ್ವಾಗತ!!
ಆತ್ಮೀಯ ಕನ್ನಡ ಬಾಂಧವರಿಗೆ ನಮಸ್ಕಾರಗಳು.!!
ಇಂದು - March 20 - ಕರ್ನಾಟಕ ರಂಗ ಮಂದಿರ ದಿವಸ.
ಈ ಶುಭ ದಿನದಂದು ಒಮಾನ್ನಲ್ಲಿ ಇರುವ ಸಮಸ್ತ ಕನ್ನಡ ಕಲಾಭಿಮಾನಿಗಳಿಗೊಸ್ಕರ ಒಂದು Yahoo Group ಅನ್ನು ಶುರು ಮಾಡಬೇಕೆಂಬುದು ಬಹುಜನರ ಆಸೆಯಾಗಿದೆ. ಅದಕೊಸ್ಕರ ಇವತ್ತು "ಕನ್ನಡ ರಂಗ " ಅನ್ನುವ Yahoo Group ಅನ್ನು ಒಮಾನಿನ ಸಮಸ್ತ ಕನ್ನಡಿಗರಿಗೊಸ್ಕರ ಇಲ್ಲಿ ಅರ್ಪಿಸುತ್ತಿದ್ದೇವೆ.
ಇದು ಬರಿ ಮಸ್ಕಾತ್ ಗೆ ಸೀಮಿತವಾಗದೆ, ಸೂರ್ ಸಲಾಲ ಮತ್ತು ಇನ್ನುಳಿದ ಎಲ್ಲ ಒಮಾನಿನ ಪ್ರದೇಶಗಳಿಂದ ಎಲ್ಲ ಕನ್ನಡಿಗರೂ ಉಪಯೋಗಿಸುವಂತಹ Internet based resource ಆಗಿ ಬೆಳೆಯಲಿ ಅನ್ನೋದು ನಮ್ಮ ಆಸೆ.
ಈ ಒಂದು ವೇದಿಕೆಯ ಮೂಲಕ ನಾವು ಕೆಲ ತುಂಬ ಅಗತ್ಯದ ವಿಷಯಗಳನ್ನು ಪರಸ್ಪರ ಹಂಚಿ ಕೊಳ್ಳಬಹುದು. ಉದಾಹರಣೆಗೆ ಈ ನಡುವೆ ಮನೆ ಬಾಡಿಗೆಯ ಕಷ್ಟ ಕೆಲವರಿಗೆ ಇದೆ. ಯಾರಿಗಾದರು ಎಲ್ಲಾದರೂ ಒಳ್ಳೆ ಮನೆ ಬಾಡಿಗೆಗೆ ಇದೆ ಅಂತ ಗೊತ್ತಾದರೆ ಈ ಕನ್ನಡ ರಂಗ ದ ಮೂಲಕ ಎಲ್ಲರಿಗೂ ತಿಳಿಸಿದಲ್ಲಿ ಉಪಯೋಗ ಆಗುತ್ತೆ. ಹಾಗೆಯೇ ಏನಾದರೂ ಕಂಪ್ಯೂಟರ್ ಬಗ್ಗೆ ಸಮಸ್ಯೆ ಇದ್ದರೆ ಅಥವ ಮಕ್ಕಳಿಗೆ ಯಾವುದಾದರೂ ಒಳ್ಳೆ ಸಂಗೀತ ಅಥವಾ Dance ಕ್ಲಾಸಸ್ ಎಲ್ಲಿದೆ ಅಂತ ತಿಳಿಕೊಳ್ಳಬೇಕಾದರೆ ಕನ್ನಡ ರಂಗ ಕ್ಕೆ ಬರಬಹುದು . ಅಥವಾ ನಿಮ್ಮಲ್ಲಿ ಒಳ್ಳೆ ಕನ್ನಡ ಸಿನೆಮಾದ ಸೀಡಿ ಅಥವಾ ಡಿವಿಡಿ ಇದ್ದರೆ ಅದನ್ನು ಪ್ರಕಟಿಸಿ ಬೇರೆಯವರ ವೀಕೆಂಡ್ ಸಿಹಿ ಮಾಡ ಬಹುದು.... ಹೀಗೆ ನಮ್ಮಲ್ಲಿ ಹತ್ತಾರು ಸಲಹೆಗಳು ಇವೆ; ನಿಮ್ಮೆಲ್ಲರ ಸೂಕ್ತ ಪ್ರತಿಕ್ರಿಯೆ ಮತ್ತು ಸಹಕಾರದಿಂದ ಇದೆಲ್ಲ ಸಾಧ್ಯ.
ಈ " ಕನ್ನಡ ರಂಗ" Yahoo Group ಗೆ subscribe ಆಗಲು
KannadaRanga-subscribe@yahoogroups.com ಗೆ ಇ ಮೈಲ್ ಕಳಿಸಿ.
ನಾವು ಇವತ್ತಿನ ಶುಭ ದಿನ ಈ ಯಾಹೂ ಗ್ರೂಪ್ ಜೊತೆ ಜೊತೆಗೆ ಒಂದು ವೆಬ್ ಬ್ಲಾಗ್ ಸಹ ಶುರು ಮಾಡಿದ್ದೇವೆ. ಈ ವೆಬ್ ಬ್ಲಾಗ್ ನೋಡಲು ನೀವು ಕ್ಲಿಕ್ ಮಾಡಬೇಕಾದ ವಿಳಾಸ ಇಂತಿದೆ:
http://www.kannadaranga.blogspot.com/
ಈ ವೇದಿಕೆಯ ಮೂಲಕ ಎಲ್ಲಾ ಕನ್ನಡಿಗರು ಇನ್ನೂ ಚೆನ್ನಾಗಿ ಒಂದಾಗಿ ಬೆರೆಯಲಿ ಅನ್ನೋ ಆಸೆಯಿಂದ - ಇಗೋ ಇಲ್ಲಿದೆ - ಕನ್ನಡ ರಂಗ।
ಕೊನೆಯದಾಗಿ, ನಮ್ಮನ್ನು ತಲುಪಲು ನೀವು ಬಳಸ ಬಹುದಾದ ವಿಳಾಸ:
KannadaRanga-owner@yahoogroups.com
ಜೈ ಹಿಂದ್! ಜೈ ಕರ್ನಾಟಕ!! ಜೈ ಜೈ ಕನ್ನಡ!!

Subscribe to:
Posts (Atom)